ಒಂದು ಬೆಚ್ಚನೆ ಗೂಡಿರಲು, ವೆಚ್ಚಕಿಷ್ಟು ಹೊನ್ನಿರಲು
ಇಚ್ಛೆ ಅರಿವ ಸತಿಯಿರಲು, ಮೆಚ್ಚಿದ ಕಲೆ ಒಲಿದಿರಲು
ಸ್ವರ್ಗಲೋಕದ ಚಿಂತೆ ಯಾಕ್ ಹೇಳಯ್ಯ
ಪ್ರೇಮಲೋಕ ಒಂದೇನೆ ಸಾಕ್ ಹೇಳಯ್ಯ
ಕಲಾವಿದ
ಕೆಸರಾಡೋ ಕಾಲಿಗೆ ಕುಸುರಿ ಯಾತಕೋ
ಬೆವರಾಡೋ ಮೈಯಿಗೆ ಪುನುಗು ಯಾತಕೋ
ಏರು ಕಟ್ಟೋಕೆ ಬದು ನೀರು ಕಟ್ಟೋಕೆ
ಕೈ ಕಾಲಿಗೆ ಶೋಕಿ ಯಾತಕೋ
ಕಿಂದರಿ ಜೋಗಿ
ಹಸ್ತದ ಊರಲ್ಲಿ ಕೈಯಿಟ್ಟರೆ ಮೈಯೂರಲ್ಲಿ ಓ ರೋಮಾಂಚನವೆ
ಸೊಂಟದ ಹಳ್ಳಿಲಿ ತೋಳಿಟ್ಟರೆ ಕಾಲುರಲ್ಲಿ ಆಹಾ ರಂಗೋಲಿಯೇ
ಮಲ್ಲಿಗೆ ಊರಲ್ಲಿ ಮೂಗಿಟ್ಟರೆ ಕಣ್ಣೂರಲ್ಲಿ ಅಯ್ಯೋ ಆನಂದವೋ
ಕಣ್ಣಿನ ಪೊಟ್ಣಕ್ಕೆ ಕಣ್ಣಿಟ್ಟರೆ ಹುಬ್ಬುರಲ್ಲಿ ಆಹಾ ನಾಚಿಕೆಯೋ
ಕೆನ್ನೆಯ ದಿಣ್ಣೆಲಿ ಬರಿ ಸಂಜೇನಾ ಬಾಯೂರ ಏರಿಲಿ ಬರಿ ಜೇನೇನಾ
ಗುಂಡಿಗೆಯ ಊರು ಗುಡ್ಡಗಳ ಕೆಳಗಿದೆ ಮಂಡಿಗೆಯ ಪೇಟೆ ಸಂತೆಯಂತೆ ಒಳಗಿದೆ
ನಮ್ಮೂರ ಹಮ್ಮೀರ
ನಾವಾಗಲಿ ನೀವಾಗಲಿ
ಗೆಳಯಾರಾಗಲಿ ಬಳಗವಾಗಲಿ
ಗುರುಗಳಾಗಲಿ ಋಷಿಗಳಾಗಲಿ
ದೇವರಾಗಲಿ ದಿಂಡರಾಗಲಿ
ತಲೆ ತೂರಿಸೋ ಹಾಗಿಲ್ಲ
because ಇದು ಹೃದಯಗಳ ವಿಷಯ
ಈ ವಿಷಯ ವಿಷ ವಿಷಯ
ನೆನಪಿರಲಿ
ನನ್ನ ನೆನಪೇ ನಿನಗುರುಳೋ
ನಿನ್ನ ಕನಸ ಕದೀಯೋ ಶಾಪ
ಶಾಪ
ಯಾರ್ ಯಾರ ಚೆಲುವೆ ಎಲ್ಲಿಹಾಳೊ
ಯಾರ್ ಯಾರ ಋಣವೋ ಎಲ್ಲಿಹುದೋ
ಒಂದೊಂದು ಅಕ್ಕಿಯ ಕಾಳಿನಲು ತಿನ್ನೋರ ಹೆಸರು ಕೆತ್ತಿಹುದು
ಶಾಂತಿ ಕ್ರಾಂತಿ
No comments:
Post a Comment