Saturday 5 March 2011

ಹಂಸಲೇಖ'ನಿ

ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೊ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೊ

ಮಹಾಕ್ಷತ್ರಿಯ (1993)




ನಾಲ್ಕು ಕಣ್ಗಳೆ ಪ್ರೇಮ ಪುಟಗಳು
ನಾಲ್ಕು ತುಟಿಗಳೆ ಪದ್ಯ ಪದಗಳು
ಪ್ರೀತಿಗ್ಯಾರು ಇಲ್ಲ ಗುರುಗಳು

ಪ್ರೀತ್ಸೋದ್ ತಪ್ಪಾ? (1998)

ಕುಂತರೂ ನಿಂತರೂ
ನಿನ್ನದೇ ತುಂತುರು
ನೆನೆದಿದೆ ನನ್ನೆದೆ

ಪ್ರೀತ್ಸೋದ್ ತಪ್ಪಾ? (1998)

ಹಂಸಲೇಖ'ನಿ





ಒಂದು ಬೆಚ್ಚನೆ ಗೂಡಿರಲು, ವೆಚ್ಚಕಿಷ್ಟು ಹೊನ್ನಿರಲು
ಇಚ್ಛೆ ಅರಿವ ಸತಿಯಿರಲು, ಮೆಚ್ಚಿದ ಕಲೆ ಒಲಿದಿರಲು
ಸ್ವರ್ಗಲೋಕದ ಚಿಂತೆ ಯಾಕ್ ಹೇಳಯ್ಯ
ಪ್ರೇಮಲೋಕ ಒಂದೇನೆ ಸಾಕ್ ಹೇಳಯ್ಯ
ಕಲಾವಿದ

ಕೆಸರಾಡೋ ಕಾಲಿಗೆ ಕುಸುರಿ ಯಾತಕೋ
ಬೆವರಾಡೋ ಮೈಯಿಗೆ ಪುನುಗು ಯಾತಕೋ
ಏರು ಕಟ್ಟೋಕೆ ಬದು ನೀರು ಕಟ್ಟೋಕೆ
ಕೈ ಕಾಲಿಗೆ ಶೋಕಿ ಯಾತಕೋ
ಕಿಂದರಿ ಜೋಗಿ

ಹಸ್ತದ ಊರಲ್ಲಿ ಕೈಯಿಟ್ಟರೆ ಮೈಯೂರಲ್ಲಿ ಓ ರೋಮಾಂಚನವೆ
ಸೊಂಟದ ಹಳ್ಳಿಲಿ ತೋಳಿಟ್ಟರೆ ಕಾಲುರಲ್ಲಿ ಆಹಾ ರಂಗೋಲಿಯೇ
ಮಲ್ಲಿಗೆ ಊರಲ್ಲಿ ಮೂಗಿಟ್ಟರೆ ಕಣ್ಣೂರಲ್ಲಿ ಅಯ್ಯೋ ಆನಂದವೋ
ಕಣ್ಣಿನ ಪೊಟ್ಣಕ್ಕೆ ಕಣ್ಣಿಟ್ಟರೆ ಹುಬ್ಬುರಲ್ಲಿ ಆಹಾ ನಾಚಿಕೆಯೋ
ಕೆನ್ನೆಯ ದಿಣ್ಣೆಲಿ ಬರಿ ಸಂಜೇನಾ ಬಾಯೂರ ಏರಿಲಿ ಬರಿ ಜೇನೇನಾ
ಗುಂಡಿಗೆಯ ಊರು ಗುಡ್ಡಗಳ ಕೆಳಗಿದೆ ಮಂಡಿಗೆಯ ಪೇಟೆ ಸಂತೆಯಂತೆ ಒಳಗಿದೆ
ನಮ್ಮೂರ ಹಮ್ಮೀರ


ನಾವಾಗಲಿ ನೀವಾಗಲಿ
ಗೆಳಯಾರಾಗಲಿ ಬಳಗವಾಗಲಿ
ಗುರುಗಳಾಗಲಿ ಋಷಿಗಳಾಗಲಿ
ದೇವರಾಗಲಿ ದಿಂಡರಾಗಲಿ
ತಲೆ ತೂರಿಸೋ ಹಾಗಿಲ್ಲ
because ಇದು ಹೃದಯಗಳ ವಿಷಯ
ಈ ವಿಷಯ ವಿಷ ವಿಷಯ
ನೆನಪಿರಲಿ

ನನ್ನ ನೆನಪೇ ನಿನಗುರುಳೋ
ನಿನ್ನ ಕನಸ ಕದೀಯೋ ಶಾಪ
ಶಾಪ

ಯಾರ್ ಯಾರ ಚೆಲುವೆ ಎಲ್ಲಿಹಾಳೊ
ಯಾರ್ ಯಾರ ಋಣವೋ ಎಲ್ಲಿಹುದೋ
ಒಂದೊಂದು ಅಕ್ಕಿಯ ಕಾಳಿನಲು ತಿನ್ನೋರ ಹೆಸರು ಕೆತ್ತಿಹುದು
ಶಾಂತಿ ಕ್ರಾಂತಿ

Thursday 3 March 2011

Giant ಕಾಯ್ಕಿಣಿ





ಜೀವಗಳ ಭಾಷೆ ಇದು ಬೇಕೆ ಅನುವಾದ
ಭಾವಗಳ ದೋಚುವುದು ಚೆಂದ ಅಪರಾಧ
                                         ಕೃಷ್ನನ್ ಲವ್ ಸ್ಟೋರಿ

ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಬ್ಬಿಕೊಳ್ಳು ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತಾ …ಉಳಿಸು ನನ್ನನು
                                                ಮಳೆಯಲಿ ಜೊತೆಯಲಿ

ಭುವಿ ಕೆನ್ನೆ ತುಂಬ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ, ಅವಳು ಬಂದ ಹೆಜ್ಜೆಯ ಗುರುತು
                                                           ಮುಂಗಾರು ಮಳೆ
ಅರಳುತಿರು ಜೀವದ ಗೆಳೆಯ
ಸ್ನೇಹದ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೆ
ಪ್ರೇಮದ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ
ಹೀಗೆ ಸುಮ್ಮನೆ
ಅರಳುತಿರು ಜೀವದ ಗೆಳೆಯ

ಹಕ್ಕಿಯು ಹಾಡಿದೆ
ತನ್ನ ಹೆಸರನು ಹೇಳದೆ
ಸಂಪಿಗೆ ಬೀರಿದೆ ಕಂಪನು
ಯಾರಿಗು ಕೇಳದೆ
ಬೀಸುವ ಗಾಳಿಯ ಹಕ್ಕಿಯ ಹಾಡಿನ
ನಂಟಿಗೆ ಹೆಸರಿನ ಹಂಗಿಲ್ಲ
ನಮಗೇಕೆ ಅದರ ಯೋಚನೆ
ಬೇಡ ಗೆಳಯ ನಂಟಿಗೆ ಹೆಸರು
ಯಾಕೇ ಸುಮ್ಮನೆ ಏ.ಏ..
ಅರಳುತಿರು ಜೀವದ ಗೆಳೆಯ
                                ಮುಂಗಾರು ಮಳೆ

ಹುಡುಗಿ ಮಳೆಬಿಲ್ಲು ಅವಳ ನೋಟ ಹೂಬಾಣ
ಎದೆಗೆ ನಾಟಿದರೆ ಸೀದಾ ಸ್ವರ್ಗಕೆ ಸೋಪಾನ
                                             ಗೆಳೆಯ (2007)

ಕಣ್ಣು ತೆರೆದು ಕಾಣುವ ಕನಸೇ ಜೀವನ
                                              ಮಿಲನ


ಹಂಸ ಲೇಖ'ನಿ

ಪ್ರತಿ ರಾತ್ರಿ ಕಣ್ಣ ಮುಚ್ಚದೇ ನಾನು... ನಾನು....
ಪ್ರತಿ ಘಳಿಗೆ ಕಾದು ಕುಳಿತರೂ.... ಕನಿಕರಿಸದೆ ಹೋದೆ
ನಿನ್ನ ಕಣ್ಣ ಒಳಗೆ ಕುಳಿತೆನೇ ನಾನು.....ನಾನು....
ಕನಸಲ್ಲಿ ಬೆರೆವ ಎಂದರೂ....ನಿದಿರಿಸದೇ ಹೋದೆ
                   ಎಸ್. ಪಿ. ಸಾಂಗ್ಲಿಯಾನ (1990)

ಮಂದಾವಾಗಿ ಬಳುಕುವಂತಾ ನಾರಿಯಿವಳ
ಅಂದ ನೋಡ ನಿಂತಾಗ, ಚಂದ ನೋಡ ನಿಂತಾಗ
ಯಾರೊ ನೀನು ಎಂದು ಕೇಳುತಾವೆ ಇವಳ ಪೊಗರಿನ ಹೃದಯ ಬಾಲಕಿಯರು
                                ನೆನಪಿರಲಿ

ಬಾಡೋ ಮಲ್ಲಿಗೆ ಹೂವ್ಯಾಕೆ,
ಶಿಲೆಯ ಬಾಲಿಕೆ ಅವಳ್ಯಾಕೆ ಹೋಲಿಕೆ
                    ಮನೆದೇವ್ರು

ಆಗುಂಬೆಯ ಕಾಡಲ್ಲಿನ ದಾಳಿಂಬೆ ಕೀಳ ಹೋದರೆ
ದಾಳಿಂಬೆಯ ರೆಂಬೆಯಲ್ಲಿ ಹೆಜ್ಜೇನು ಕೂಗಿ ಕೊಟ್ಟಿತು
                           ಗಡಿಬಿಡಿ ಗಂಡ (1993)
ಹಣತೆಯ ಅಡಿಯಲ್ಲೇ ಕತ್ತಲೆಯ ತವರು
ಇರುಳಿನ ಬೇರಲ್ಲೇ ಹೊಂಬೆಳಕಿನ ಚಿಗುರು
                     ಕಲ್ಲರಳಿ ಹೂವಾಗಿ
ಸಾಗರ ತುಂಬಲು ಬಿಂದಿಗೆ ಸಾಲದು
ಪ್ರೀತಿಯ ತುಂಬಲು ಗುಂಡಿಗೆ ಸಾಲದು
                     ಗೋಪಿಕೃಷ್ಣ (1992)
ಒಮ್ಮೆ ಸರಸ ವಿರಸ ಬೆಸುಗೆ ಬಿರುಕು
ಜೀವನ ಜೀವನ ಏರುಪೇರಿನಾ ಗಾಯನ
                        ಮನೆದೇವ್ರು (1992)